Monday, January 31, 2011

ಕುಂಚನ ಹನಿಗವನಗಳ ಗುಚ್ಛ-೧

1.
ನವವರುಷ ನಿಮಗೆ ನವೋಲ್ಲಾಸ ನೀಡಲಿ.
ನನಸುಗಳೆಲ್ಲಾ ನಿಲುಕಲಿ.
ನೆಮ್ಮದಿಯ ನೆರಳು ನೈದಿಲೆಯಾಗಿ ನಲಿಯಲಿ.
ನೀಲಾಕಾಶದೆತ್ತರದ ನಿಲುವುಗಳು ನಿರಾಳವಾಗಿ ನೆರವೇರಲಿ :)

2.
ಡಿಸೆಂಬರ್ ಬಂದಿತೆಂದರೆ ಜ್ವರದ ಅಬ್ಬರ.
ಎಂಜಿನೀರ್ ಸ್ಟುಡೆಂಟ್ಸ್ ಗೆ ಪರೀಕ್ಷೆಯ ಜ್ವರ.
ಮಿಕ್ಕಿದವರಿಗೆ ಚಳಿ ಜ್ವರ.
ಎರಡೂ ಇದ್ದವರಂತೂ ಹರೋಹರ :)

3.
ಅನುಭವಿಸು ಜೀವನದ ಪ್ರತಿಯೊಂದು ಗುಟುಕು,
ಪ್ರಯತ್ನದಲ್ಲೇ ಯಶಸನ್ನ ಹುಡುಕು,
ಆ ಸಂತಸದಿಂದ ಹಸನಾಗುವುದು ನಮ್ಮ ಬದುಕು.

4.
ಲಾಯರ್ ಹಾಕ್ತಾನೆ ಕಪ್ಪು ಕೋಟು.
ಡಾಕ್ಟರ್ ಹಾಕ್ತಾನೆ ಬಿಳಿಯ ಕೋಟು.
ರಾಜಕಾರಣಿ ಖಾದಿಯ ಜೇಬಲ್ಲಿ ಕಪ್ಪು/ಬಿಳುಪು ನೋಟು.
ಭ್ರಷ್ಟಾಚಾರದಿಂದ ತತ್ತರಿಸುತ್ತಿರುವ ಭಾರತದತ್ತ ಮುಗುಳ್ನಗುತ್ತಿರುವ ಗಾಂಧಿ ತಾತನ ನೋಟು !

5.
ನಿನ್ನನ್ನು ದಿನಾ ನೋಡುವ ಜಾಗ ಬಸ್ ಸ್ಟ್ಯಾಂಡು
ಅದೇಕೆ ಚುಚ್ಚಿರುತ್ತದೆ ಯಾವಾಗಲು ನಿನ್ನ ಕಿವಿಗೆ ಐಪಾಡು
ಇರಲಿ ಹೇಳಬಾರದೇಕೆ ಅದಾವುದು ನೀ ಕೇಳುತ್ತಿರುವ ಹಾಡು
ನಿನಗೆ ಹೇಗೆ ತಿಳಿಸಲಿ ಚೆಲುವೆ ನನ್ನ ಮನದ ಪಾಡು
ನಾಳೆಯಾದರು ನನ್ನೆಡೆ ಒಮ್ಮೆ ತಿರುಗಿ ನೋಡು

6.
ಬಾಳಿನ ಆ ಘಟ್ಟವೇ ಅತ್ಯಮೂಲ್ಯ.
ಅಮ್ಮನ ನಿರಾಳ ಪ್ರೀತಿ,ತಂದೆಯ ವಾತ್ಸಲ್ಯ.
ಚಿಂತೆಗಳಿಲ್ಲದ ಆ ದಿನಗಳೇ ಅವಿಸ್ಮರಣೀಯ.
ಸರಳತೆಯ ಆ ಭಾವವೇ ಅನನ್ಯ.
ಮತ್ತೇಕೆ ನೀ ಬರಬಾರದು ಓ ನನ್ನ ಬಾಲ್ಯ.
ಎಲ್ಲರಿಗೂ ಮಕ್ಕಳ ದಿನದ ಶುಭಾಶಯ !!


7.
ಪ್ರೀತಿನ ಪ್ರೀತಿ ಇಂದ ಪ್ರೀತಿಸು,
ಪ್ರೇಮಾನ ಪ್ರೇಮದಿಂದ ಪ್ರೇಮಿಸು,
ಯಾವಾಗ ಹೆಂಗ್ ಇರತ್ತೋ ಗೊತ್ತಿಲ್ಲ ಹುಡುಗೀರ ಮನಸ್ಸು,
ರಿಸ್ಕ್ ಯಾಕ್ ತಗೊತ್ಯ ಮಗ,ಅವರ ತಂಗಿಯರನ್ನೂ ಪಟಾಯ್ಸು :)

8.
ಎಷ್ಟೇ ಮೇಲೆ ಹಾರಿದರು ಗಾಳಿಪಟ,ಅದರ ಸೂತ್ರ ಮಾತ್ರ ಹಾರಿಸುವವನ ಕೈಯಲ್ಲೇ
ನೀ ಎಷ್ಟೇ ದೂರ ಹೋದರೂ ಪ್ರಿಯೆ,ನಿನ್ನ ನೆನಪು ಮಾತ್ರ ನನ್ನ ಮನದಲ್ಲೇ !


9.
ಬೀದಿ ನೀರಿಗಾಗಿ ಜಗಳ ಬಿಂದಿಗೆ ತುಂಬೋ ವರೆಗು.
ಸಿಟಿ ಬಸ್ಸಿನಲ್ಲಿ ಜಗಳ ಸೀಟ್ ಸಿಗೊವರೆಗು.
ಆಟೋ ಡ್ರೈವರ್ ಗಳ ಜಗಳ ಸಿಗ್ನಲ್ ಬೀಳೋ ವರೆಗು.
ಸ್ಕೂಲ್ ಮಕ್ಕಳ ಜಗಳ ಬೆಲ್ ಹೊಡೆಯೋವರೆಗು.
ಗಂಡ ಹೆಂಡರ ಜಗಳ ಉಂಡು ಮಲಗೋ ವರೆಗು
ಆದರೆ ರಾಜಕಾರಣಿಗಳ ಜಗಳ ಹಿಂದೂ,ಮುಂದೂ...ಸೂರ್ಯ ಇರೋವರೆಗು !

10.
ತೇರ ಏರಿ ಅಂಬರದಾಗೆ ನೇಸರ ನಗುತ್ತಾನೆ.
ಹೆಗಲ ಮೇಲೆ ನೇಗಿಲಿಡಿದ ರೈತ ಹೊಲದ ಕಡೆ ಹೊರಟಿದ್ದಾನೆ.
ಹೆಗಲ ಮೇಲೆ ಲ್ಯಾಪ್ಟಾಪ್ ಏರಿಸಿ ಸಾಫ್ಟ್ವೇರ್ ಇಂಜಿನಿಯರ್ ವೋಲ್ವೋ ಬಸ್ ಹತ್ತಿದ್ದಾನೆ.
ಸೂರ್ಯ ಭೂಮಿಯ ಬೆಳಗುತ್ತಾನೆ,ರೈತ ಬೆಳೆ ಬೆಳೆಯುತ್ತಾನೆ,ಸಾಫ್ಟ್ವೇರ್ ಇಂಜಿನಿಯರ್ ಕೀ-ಬೋರ್ಡ್ ಕುಟ್ಟುತ್ತಾನೆ,
ಇಡೀ ದಿನ ಕುಟ್ಟುತ್ತಲೇ ಇರುತ್ತಾನೆ :)

11.
ವಿಶ್ವಾಸವೆಂಬ ಹೂಮಳೆ ಮೂಡಿ,
ಗೆಳೆತನವೆಂಬ ಹೊಂಬಿಸಿಲ ಜೊತೆಗೂಡಿ,
ಮಾಡುವುದು ಸ್ನೇಹವೆಂಬ ಕಾಮನಬಿಲ್ಲಿನ ಮೋಡಿ
ನಿಮ್ಮೆಲ್ಲರಿಗೂ ಸ್ನೇಹದಿನದ ಸ್ನೇಹಪೂರ್ವಕ ಶುಭಾಶಯಗಳು

12.
ಧರೆಯ ಆಲಿಂಗನಕ್ಕೆ ಆಹ್ವಾನಿಸುತ್ತಿರುವುದು ವರುಣನ ಈ ಪ್ರೀತಿಯ ಕರೆ.
ಅದಕ್ಕಾಗಿಯೇ ಸುರಿಯುತ್ತಿದೆ ಧಾರಾಕಾರ ಮಳೆ.

ನಮ್ಮೂರು ಮೈಸೂರು

ಚೆಲುವ ಕನ್ನಡ ನಾಡಲ್ಲಿರುವ ನಮ್ಮೂರು.
ಕಲೆ ಸಂಸ್ಕೃತಿಯ ತವರೂರು.
ಸಾರ್ಥಕತೆಯಿಂದ ಬದುಕುವರು ಇಲ್ಲಿಯ ಜನರು.
ಇದುವೇ ನಮ್ಮ ನಿಮ್ಮೆಲರ ನೆಚ್ಚಿನ ಮೈಸೂರು.

ಪ್ರವಾಸಿಗರ ಕಣ್ಮಣಿ ಇಲ್ಲಿನ ಅರಮನೆ,
ವಿಸ್ಮಯದಿಂದ ಕೂಡಿದೆ ಇದರ ಹಿನ್ನೆಲೆ,
ವೊಡೆಯರರ ರಾಜವೈಭವಕ್ಕೆ ಹಿಡಿದ ಕನ್ನಡಿ ಈ ನೈದಿಲೆ,
ನಮಗಂತೂ ಇದು ಸ್ಪೂರ್ತಿಯ ಸೆಲೆ.

ಪಕ್ಕದಲ್ಲೇ ಇದೆ ದೇವರಾಜ ಮಾರುಕಟ್ಟೆ.
ನೋಡಲು ಮರೆಯದಿರಿ ಕನ್ನಂಬಾಡಿ ಕಟ್ಟೆ.
ವಿಶ್ವೇಶ್ವರಯ್ಯನವರಿಗೆ ಧನ್ಯವಾದಗಳು ಇದನ್ನ ಕಟ್ಟಿದ್ದಕ್ಕೆ.
ಬೂರಾದರೆ ಇದೆ ಅರಸ್ ರೋಡ್ನಲ್ಲಿ ಕಾಫಿ ಡೇ ಹರಟೆ ಹೊಡಿಯಲಿಕ್ಕೆ

ತಪ್ಪದೆ ನೋಡಿ ಜಗನ್ಮೋಹನ ಆರ್ಟ್ ಗ್ಯಾಲರಿ.
ಟೈಮ್ ಇದ್ದರೆ ಹೋಗಿ ಬಲಮುರಿ ಎಡಮುರಿ.
ಚಾಟ್ ಸ್ತ್ರೀಟ್ ನಲ್ಲಿ ಸವಿಯಿರಿ ಖಾರಾ ಚುರುಮುರಿ.
ಕುವೆಂಪು ಅವರಿಂದ ನಾಮಕರಣಗೊಂಡಿದೆ ಇಲ್ಲಿನ ಮಾನಸಗಂಗೋತ್ರಿ.

ನಗುನಗುತ್ತಾ ನಿಂತಿಹಳು ತಾಯಿ ಚಾಮುಂಡಿ ಬೆಟ್ಟದ ಮೇಲೆ.
ಆಕೆಯ ಆಶಿರ್ವಾದ ನಮಗೆ ಸದಾ ಆಸರೆ.
ಮೈಸೂರ ಜನರಲ್ಲಿ ಭೂರ್ಗರೆಯುವುದು ಏನನ್ನೂ ಬಯಸದ ಅಕ್ಕರೆ.
ಅದನ್ನು ಅನುಭವಿಸುವುದು ಕುಡಿದಂತೆ ಹಾಲು-ಸಕ್ಕರೆ.

ಎಲ್ಲಾದರೂ ಇರು,ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು.ಕನ್ನಡಿಗ ಎಂದು ಹೆಮ್ಮೆ ಇಂದ ಹೇಳು.
ನಿರಂತರ ವಿಜ್ರುಂಭಿಸಲಿ ನಮ್ಮ ಚೆಲುವ ಕನ್ನಡ ನಾಡು.
ಅದಕ್ಕೆ ಮುಕುಟಧಾರೆಯಾಗಿರಲಿ ನಮ್ಮ ನೆಚ್ಚಿನ ಮೈಸೂರು.

ಅಮ್ಮ...ಐ ಲವ್ ಯು....

ಅಮ್ಮನ ಅಕ್ಕರೆ,ಕುಡಿದಂತೆ ಹಾಲು ಸಕ್ಕರೆ.
ಅಮ್ಮನ ಪ್ರೀತಿ,ನಮ್ಮ ಬಾಳಿಗೆ ಸದಾ ಸ್ಫೂರ್ತಿ.
ಅಮ್ಮನ ಮಮತೆ,ನಮ್ಮ ಬದುಕಿನ ಹಣತೆ.
ಅಮ್ಮನ ಮುದ್ದು,ಇದ್ದರೆ ಬರುವೆವು ಎಲ್ಲವನ್ನು ಗೆದ್ದು.
ಅಮ್ಮನ ಮಡಿಲು,ನಮಗೆ ಸ್ವರ್ಗದ ಬಾಗಿಲು.
ಅಮ್ಮನ ವಾತ್ಸಲ್ಯ,ಎಲ್ಲದಕಿಂತ ಅತ್ಯಮೂಲ್ಯ.
ಎಷ್ಟೇ ದೂರ ಇದ್ದರೂ ಅಮ್ಮನ ನೆನಪು,ತರುವುದು ಬಾಳಲಿ ಹುರುಪು.
ಅಮ್ಮನ ಸನಿಹ,ನಿರಂತರ,ಅತಿಮಧುರ.
ಅಮ್ಮ ನಮ್ಮಲ್ಲಿ ಇಡುವ ನಂಬಿಕೆ,ಬಡಿದೊಡಿಸುವುದು ಕಷ್ಟಗಳನ್ನ ಹಿಂದಕ್ಕೆ.
ಅಮ್ಮನ ಪ್ರೋತ್ಸಾಹದ ಮಾತು,ನಮ್ಮನ್ನ ಹುರಿದುಂಬಿಸಲು ಅಷ್ಟು ಸಾಕು.
ಅಮ್ಮನ ರಕ್ಷೆ,ಭೋರ್ಗರೆಯುವುದು ಕೊಂಚವೂ ಇಲ್ಲದೆ ಅಪೇಕ್ಷೆ.
ಅಮ್ಮನ ವಿಸ್ವಾಸ,ಎಷ್ಟೇ ಇದ್ದರೂ ಅವಳು ನಿಸ್ವಾರ್ಥ.
ದೇವರು ಎಲ್ಲೆಡೆ ಇರಲು ಅಸಾಧ್ಯ,ಅದಕ್ಕಾಗಿಯೇ ತಾಯಿಯನ್ನು ಸೃಷ್ಟಿಸಿದ.
ತಾಯಂದಿರ ದಿನದ ಪ್ರೀತಿಪೂರ್ವಕ ಶುಭಾಶಯಗಳು.
ಐ ಲವ್ ಯು ಅಮ್ಮ,ಹಿಂದೂ,ಇಂದೂ,ಮುಂದೂ,ಎಂದೆಂದಿಗೂ